Andada Maneya Song Lyrics In Kannada
ಅಟ್ಟ ಅಡಿಗೆ ಅಕ್ಷಯವಾಗ್ಲಿ
ಲಕ್ಷ ಮಂದಿಗೆ ಭೋಜನವಾಗ್ಲಿ
ಲಕ್ಷ್ಮಿಪತಿಯೇ ಸತಿ ಸಮೇತ
ತಳ ಊರ್ಲಿ ಇಲ್ಲೇ ತಳ ಊರ್ಲಿ
ಅಂದದ ಮನೆಯಾ
ಚಂದದ ಮನೆಯಾ
ಅಂದದ ಮನೆಯ ಚಂದದ ಮನೆಯ
ನಂದನ ಮಾಡೇ ಓ ಲಕುಮಿ
ನಂದನ ಮಾಡೇ ಓ ಲಕುಮಿ
ಅಂದದ ಮನೆಯ ಚಂದದ ಮನೆಯ
ನಂದನ ಮಾಡೇ ಓ ಲಕುಮಿ
ನಂದನ ಮಾಡೇ ಓ ಲಕುಮಿ
ಬೆಳಕಿಗೂ ಇಲ್ಲಿ ಬಾಗಿಲಿದೆ..
ದ್ಯಾವರಿಗೂನು ಕ್ವಾಣೆ ಇದೆ
ಗಂಗೆಗೂ ಮಣ್ಣ ಗಡಿಗೆ ಇದೆ
ಬೆಂಕಿಗೂ ಬೆಚ್ಚನೆ ಗೂಡಿದೆ
ಮನಸಿದ್ದ ಹಾಗೇ ಮನೆಯಂತೆ
ನಗುವಿದ್ದ ಮನೆಗೆ ಎಲ್ಲೋ ಚಿಂತೆ
ಅಂದದ ಮನೆಯ ಚಂದದ ಮನೆಯ
ನಂದನ ಮಾಡೇ ಓ ಲಕುಮಿ
ನಂದನ ಮಾಡೇ……. ಓ ಲಕುಮಿ…..
ತಳಮಳಗಳನೆ ಮರೆಸಬಲ್ಲ…ಆಆಆ
ತಳಮಳಗಳನೆ ಮರೆಸಬಲ್ಲ
ಕಂದನಿಗೊಂದು ನಾಮಕರಣ ಯೋಗವಮ್ಮ…
ಪ್ರಾಣಕೆ ಮನೆಯೇ ದೇಹವಮ್ಮ..ಆಆಆ ಆಆ
ಪ್ರಾಣಕೆ ಮನೆಯೇ ದೇಹವಮ್ಮ
ತನುಮನ ಧನಕು ಆಗುಹೋಗಿಗೂ ಸೂರಿದಮ್ಮ…
ಲಾಲಿಗು ತೂಗೋ ತೊಟ್ಟಿಲಿದೆ
ಕರುಣೆಗು ಕಣ್ಣ ಬಟ್ಟಲಿದೆ
ಮನಸಿದ್ದ ಹಾಗೇ ಮನೆಯಮ್ಮ
ಅಳುವಿದ್ದ ಮನೆಗೆ ನಗುವೇ ಗುಮ್ಮ
ಅಂದದ ಮನೆಯ ಚಂದದ ಮನೆಯ
ನಂದನ ಮಾಡೇ ಓ ಲಕುಮಿ
ನಂದನ ಮಾಡೇ…….. ಓ ಲಕುಮಿ…..
ನಮ್ಮನೆ ಮುಂದಣ ಚಪ್ಪರದಲ್ಲಿ..ಈಈಈ
ನಮ್ಮನೆ ಮುಂದಣ ಚಪ್ಪರದಲ್ಲಿ
ರತಿ ಮನ್ಮಥರು ಅಕ್ಷತೆಗಾಗಿ ಕಾಯಲಮ್ಮ…..
ಅಂತಃಪುರವ ಸೇರಿದ ಮ್ಯಾಲೇ…ಏಏಏಏ…
ಅಂತಃಪುರವ ಸೇರಿದ ಮ್ಯಾಲೇ
ತಪ್ಪು ಒಪ್ಪು ಹರೆಯ ಮುಪ್ಪು ಕಾಣಲಮ್ಮ….
ಕಾಮನೆಗೊಂದು ಕಾಲವಿದೆ
ಸೃಷ್ಟಿಗೂ ಗರ್ಭ ಗುಡಿಯಿದೆ
ಮನಸಿದ್ದ ಹಾಗೇ ಮನೆಯಂತೆ
ನಗುವಿದ್ದ ಮನೆಗೆ ಎಲ್ಲೋ ಚಿಂತೆ
ಅಂದದ ಮನೆಯಾ ಚಂದದ ಮನೆಯಾ
ನಂದನ ಮಾಡೇ ಓ ಲಕುಮಿ
ನಂದನ ಮಾಡೇ…… ಓ ಲಕುಮಿ……
Also, Read: